ಭಾರೀ ದನಗಳ ಜಾತ್ರೆಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜುರವರ ಎತ್ತುಗಳು ಭಾಗಿ..!ಸಿ.ಎಸ್. ಪುಟ್ಟರಾಜು ಅವರು ಪತ್ನಿ ನಾಗಮ್ಮ, ಮೊಮ್ಮಗ ಹಾಗೂ ಅಣ್ಣನ ಪುತ್ರ ಡೇರಿ ಅಧ್ಯಕ್ಷ ಸಿ.ಶಿವಕುಮಾರ್ ಜೊತೆ ಎತ್ತುಗಳನ್ನು ಹಿಡಿದುಕೊಂಡು ಜಾತ್ರಾ ಆವರಣದಲ್ಲಿ ಮೆರವಣಿಗೆ ನಡೆಸಿದರು. ನಾಲ್ಕು ಹಲ್ಲು 6.50 ಲಕ್ಷ ರು., ಆರು ಹಲ್ಲಿನ ಹಳ್ಳಿಕಾರ್ ತಳಿಯ ಜೋಡಿ ಎತ್ತು 3.50 ಲಕ್ಷ ರು., ಮಗಧೀರ ಹೋರಿ 3 ಲಕ್ಷ ರು. ಬೆಲೆ ಬಾಳು ತಮ್ಮ ಎತ್ತುಗಳನ್ನು ಮೆರವಣಿಗೆ ನಡೆಸಿ ಬಳಿಕ ಜಾತ್ರಾ ಮೈದಾನದಲ್ಲಿ ಪ್ರದರ್ಶನಕ್ಕಾಗಿ ಕಟ್ಟಿದರು.