ತೀರ್ಥಹಳ್ಳಿ ಮಾರಿ ಜಾತ್ರೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ವೈಭವಮಾ 12ರಿಂದ 9 ದಿನಗಳ ಪರ್ಯಂತ ನಡೆಯಲಿರುವ ತೀರ್ಥಹಳ್ಳಿಯ ಶ್ರೀ ಮಾರಿಕಾಂಬಾ ಜಾತ್ರೆಗೆ ಭರದ ಸಿದ್ದತೆ ನಡೆದಿದ್ದು ದೇವಸ್ಥಾನ ಮತ್ತು ಪಟ್ಟಣದ ಆಜಾದ್ ರಸ್ತೆ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದೆ. ಮಾ.12ರಂದು ಮಾರಿ ಸಾರುವುದರೊಂದಿಗೆ ಚಾಲನೆ ದೊರೆಯಲಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೇ ವಿಶೇಷವಾಗಿ ಮಾ.14 ರಿಂದ 17ರವರೆಗೆ ಬಾಳೇಬೈಲು ಮೈದಾನದಲ್ಲಿ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿಯನ್ನು ಕೂಡಾ ಆಯೋಜಿಸಲಾಗಿದೆ.