ಹೆಣ್ಣು ಆದರ್ಶ ಸಮಾಜದ ಕಣ್ಣು: ಡಾ.ಸುರೇಖಾಗುಳೇದಗುಡ್ಡ ಪಟ್ಟಣದಲ್ಲಿ ಪಟ್ಟಸಾಲಿ ನೇಕಾರ ಸಮಾಜ ಮಹಿಳಾ ಘಟಕ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಡಾ.ಸುರೇಖಾ ಯಂಡಿಗೇರಿ ಮಾತನಾಡಿ, ಹೆಣ್ಣು ಆದರ್ಶ ಸಮಾಜದ ಕಣ್ಣು. ಸಮಾಜದಲ್ಲಿ ಮಹಿಳೆಯರ ಕಾಳಜಿ ಅವಿಸ್ಮರಣೀಯ. ಭಾರತೀಯ ಸಂಸ್ಕೃತಿ ಶ್ರೇಷ್ಠವಾಗಿದ್ದು ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಮೂಡಿಸುವ ಕೆಲಸ ಮಹಿಳೆಯರು ಮಾಡಬೇಕು ಎಂದರು.