ಪ್ರೇಕ್ಷಕರ ಮನರಂಜಿಸಿದ ಟಗರುಗಳ ಜಿದ್ದಾಜಿದ್ದಿ ಕಾಳಗ ರಂಗೇರಿರುವ ಅಖಾಡ, ಅಖಾಡದಲ್ಲಿ ಗೆಲುವು ನಂದೇ ಅಂತ ಗುದ್ದಾಡುತ್ತಿರುವ ಟಗರುಗಳು, ಹಿಂದೆ ಹೆಜ್ಜೆಯಿಟ್ಟು ಮರುಕ್ಷಣವೇ ಮುಂದೆ ನುಗ್ಗಿ ಡಿಕ್ಕಿ ಹೊಡೆಯುತ್ತಾ ಎದುರಾಳಿಯನ್ನು ಮಣ್ಣು ಮುಕ್ಕಿಸಲು ಹೋರಾಟ, ಕೊಬ್ಬಿದ ಟಗರುಗಳ ಅಬ್ಬರದ ಕಾಳಗ ಕಂಡು ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸುತ್ತಿದ್ದ ಪ್ರೇಕ್ಷಕರು.. ಈ ರೋಚಕ ದೃಶ್ಯ ಶಿವಮೊಗ್ಗ ನಗರದ ಎನ್‌ಇಎಸ್ ಮೈದಾನದಲ್ಲಿ ಭಾನುವಾರ ಮಾರಿಕಾಂಬ ಜಾತ್ರೆ ಅಂಗವಾಗಿ ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗದಿಂದ ಆಯೋಜಿಸಿದ್ದ ಟಗರು ಕಾಳಗದಲ್ಲಿ ಕಂಡುಬಂದವು.