ಪರಿಶೀಲಿಸಿ ಜೋಡೆತ್ತಿನ ಗಾಡಿ ಶರ್ಯತ್ತುಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಮಲಿಕವಾಡ ಶರ್ಯತ್ತು ಮೈದಾನದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರ 77ನೇ ಜನ್ಮ ದಿನಾಚರಣೆ ನಿಮಿತ್ಯವಾಗಿ ಅವರ ಅಭಿಮಾನಿಗಳು ಅಂತಾರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಓಡಿಸುವ ಸ್ಪರ್ಧೆಯನ್ನು ಮಂಗಳವಾರ ಸಂಜೆ ಆಯೋಜನೆ ಮಾಡಿದ್ದರು. "ಅ " ವರ್ಗ, "ಬ " ವರ್ಗ ಹಾಗೂ "ಕ " ವರ್ಗ ಸೇರಿದಂತೆ ಮೂರು ವಿಭಾಗಗಳಲ್ಲಿ ನಡೆದ ಜೋಡೆತ್ತಿನ ಗಾಡಿ ಶರ್ಯತ್ತಿಗೆ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಚಿಕ್ಖೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ ಚಾಲನೆ ನೀಡಿದರು.