ನರ್ಸಿಂಗ್ ಕೋರ್ಸ್ ಗೆ ಬೇಡಿಕೆ ಹೆಚ್ಚು: ಹೊರ್ತಿವಿಜಯಪುರ: ನರ್ಸಿಂಗ್ ಕೋರ್ಸ್ ಬೇಡಿಕೆ ಹೆಚ್ಚಾಗಿದ್ದು, ಈ ಕ್ಷೇತ್ರವೂ ಪವಿತ್ರವಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲರಜಾಕ ಹೊರ್ತಿ ಹೇಳಿದರು. ನಗರದ ಅಲ್ ಅಮೀನ್ ಫಾತಿಮಾ ಸ್ಕೂಲ್ ಮತ್ತು ಕಾಲೇಜ ಆಫ್ ನರ್ಸಿಂಗ್ ಅಲ್ ಅಮೀನ್ ಮೆಡಿಕಲ್ ಕಾಲೇಜ ಹಾಗೂ ಆಸ್ಪತ್ರೆಯಲ್ಲಿ 19ನೇ ಬ್ಯಾಚ್ ನ ಡಿಪ್ಲೋಮಾ ನರ್ಸಿಂಗ್ ಮತ್ತು 25ನೇ ಬ್ಯಾಚ್ ನ ಬೇಸಿಕ್ ಬಿಎಸ್ಸಿ ನರ್ಸಿಂಗ್, 2019ನೇ ಬ್ಯಾಚ್ ನ ಬಿಎಸ್ಸಿ ನರ್ಸಿಂಗ್ ಹಾಗೂ 2021ನೇ ಬ್ಯಾಚ್ ನ ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ಘಟಕೋತ್ಸವ ಉದ್ಘಾಟಿಸಿ ಮಾತನಾಡಿದರು.