ಬೂದನೂರು ಉತ್ಸವ ‘ಅಂತ್ಯವಲ್ಲ ಆರಂಭ’: ಶಾಸಕ ಪಿ.ರವಿಕುಮಾರ್ನಾನು ಶಾಸಕನಾಗಿರಲಿ, ಇಲ್ಲದಿರಲಿ ಬೂದನೂರು ಉತ್ಸವ ನಿರಂತರವಾಗಿ ಮುಂದುವರೆಯಬೇಕು. ಮಂಡ್ಯದ ಸಾಂಸ್ಕೃತಿಕ ಪರಂಪರೆ ಹೊರ ಜಗತ್ತಿಗೆ ಪರಿಚಯವಾಗಬೇಕು. ಪ್ರವಾಸಿಗರನ್ನು ಸೆಳೆದು ಪ್ರವಾಸೋದ್ಯಮ ಅಭಿವೃದ್ಧಿ ಕಾಣಬೇಕೆಂಬುದು ಬೂದನೂರು ಉತ್ಸವದ ಉದ್ದೇಶ. ಹೊಸ ಪರಂಪರೆಗೆ ನಾಂದಿ ಹಾಡಿರುವ ಬೂದನೂರು ಉತ್ಸವ ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿಜೃಂಭಣೆಯಿಂದ ನಡೆಯಲಿದೆ. ಇದು ಉತ್ಸವದ ಅಂತ್ಯವಲ್ಲ, ಆರಂಭ.