ಸಕಲ ಜೀವಿಗಳ ಲೇಸು ಬಯಸೋದೇ ಶ್ರೇಷ್ಠಧರ್ಮಜಗತ್ತನ್ನು ಜಯಿಸುವುದು ಮುಖ್ಯವಲ್ಲ. ತನ್ನನ್ನು ತಾನು ಮೊದಲು ಜಯಿಸಿ, ಮನಸ್ಸನ್ನು ಗೆಲ್ಲಬೇಕು. ಪರೋಪಕಾರಕ್ಕಾಗಿ ತನ್ನನ್ನು ತಾನು ತ್ಯಾಗ ಮಾಡುವುದು ಶ್ರೇಷ್ಠವಾದುದು ಎಂದು ಸಾಗರ ತಾಲೂಕಿನ ಆನಂದಪುರ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ನುಡಿದಿದ್ದಾರೆ.