ಮೌಢ್ಯ, ಅಂಧಕಾರ ವಿನಾಶಕ್ಕೆ ವಿಜ್ಞಾನ ಸಹಕಾರಿ: ಫಣೀಂಧರ್ ಕುಮಾರ್ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲಿ ಸಣ್ಣ ಸಣ್ಣ ಪ್ರಯೋಗಗಳು ಮತ್ತು ಮಾದರಿಗಳನ್ನು ರಚಿಸಲು ಮುಂದಾಗಬೇಕು. ಆಗ ವಿಜ್ಞಾನದ ಪರಿಚಯವಾಗಿ ವೈಜ್ಞಾನಿಕ ಮನೋಭಾವನೆಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ವೈಜ್ಞಾನಿಕ ಚಿಂತನೆ ಮತ್ತು ವೈಚಾರಿಕ ಸಾಮರ್ಥ್ಯ ಲಭಿಸುತ್ತದೆ. ಆಗ ಮೌಢ್ಯತೆಗಳು, ಕಂದಾಚಾರಗಳು, ಮೂಢನಂಬಿಕೆಗಳ ಹಿಂದೆ ಇರುವ ತರ್ಕ ಅರ್ಥವಾಗಿ ಮೋಸ ಹೋಗುವುದು ತಪ್ಪುತ್ತದೆ.