ಗದಗ ಜಿಲ್ಲೆಯಲ್ಲೂ ದಾಳಿ, ಅಪಾರ ಪ್ರಮಾಣದ ಪಡಿತರ ಅಕ್ಕಿ ವಶರಾಜ್ಯದಲ್ಲಿ ಸಂಚಲನ ಮೂಡಿಸಿರುವ ಪಡಿತರ ಅಕ್ಕಿ ಪ್ರಕರಣ ಗದಗ ಜಿಲ್ಲೆಯಲ್ಲಿಯೂ ಸದ್ದು ಮಾಡುತ್ತಿದ್ದು, ಮುಂಡರಗಿ ತಾಲೂಕಿನ ಶಿರೋಳ, ಕದಾಂಪುರ ಮತ್ತು ಡೋಣಿ ಗ್ರಾಮಗಳಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಅಪಾರ ಪ್ರಮಾಣದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.