ಪ್ರತಿಯೊಬ್ಬರೂ ಗೋವಿನ ರಕ್ಷಣೆಗಾಗಿ ಮುಂದಾಗಿಕಸ್ತೂರಬಾ ಗೋಶಾಲೆಯಲ್ಲಿ ನಡೆದ 9ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಗೋವಿನ ರಕ್ಷಣೆಗಾಗಿ ಮುಂದಾಗಬೇಕು. ಗೋವುಗಳು ನಮ್ಮ ಸಂಸ್ಕೃತಿಯ, ಕೃಷಿಯ, ಆಧ್ಯಾತ್ಮದ ಮೂಲ ಭಾಗವಾಗಿವೆ. ಅವುಗಳನ್ನು ಕೇವಲ ಧಾರ್ಮಿಕ ದೃಷ್ಟಿಕೋಣದಿಂದ ಮಾತ್ರವಲ್ಲ, ಪರಿಸರ ಹಾಗೂ ಆರ್ಥಿಕ ಸ್ಥಿತಿಗತಿಯಲ್ಲೂ ಅವುಗಳ ಪಾತ್ರ ಮಹತ್ತರ ಎಂದರು. ಗೋವುಗಳನ್ನು ಉಳಿಸುವುದರಿಂದ ನಾವು ಕೇವಲ ಪಶುಪಾಲನೆಯನ್ನಷ್ಟೇ ನಡೆಸುವುದಿಲ್ಲ, ಮಾನವೀಯತೆ, ದಯೆ ಮತ್ತು ಧರ್ಮವನ್ನು ಜೀವಂತವಾಗಿರಿಸುತ್ತೇವೆ. ಇಂತಹ ಕಾರ್ಯಗಳಿಂದ ನಾವು ಅನೇಕ ಪುಣ್ಯ ಗಳಿಸಬಹುದುಎಂದು ಹೇಳಿದರು.