ಮಹಿಳೆಯರ ಬಾಳಿನ ನಿಜವಾದ ಶಕ್ತಿ ಶಿಕ್ಷಣದಲ್ಲಿದೆಮಹಿಳೆಯರ ಮೇಲಿನ ಹಿಂಸೆ, ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಕಳ್ಳಸಾಗಣೆ ಹಾಗೂ ಬಾಲ್ಯವಿವಾಹ ಇನ್ನೂ ಸಮಾಜದಲ್ಲಿ ಕಾಡುತ್ತಿರುವ ಗಂಭೀರ ಸಮಸ್ಯೆಗಳು. ಶಿಕ್ಷಣ, ಜಾಗೃತಿ ಮತ್ತು ಕಾನೂನುಗಳ ಪರಿಣಾಮಕಾರಿ ಜಾರಿಯ ಮೂಲಕವೇ ಇದಕ್ಕೆ ಕಡಿವಾಣ ಹಾಕಬಹುದು ಎಂದು ತಜ್ಞರು, ಸಾಹಿತಿಗಳು ಹಾಗೂ ಸಮಾಜ ಸೇವಕರು ಅಭಿಪ್ರಾಯಪಟ್ಟರು. ಸಮಾಜ ಸೇವಕಿ ರೂಪ ಹಾಸನ್ ಮಾತನಾಡಿ, ಅಪ್ರಾಪ್ತೆಯರ ಮೇಲಿನ ದೌರ್ಜನ್ಯ ಕುರಿತು ಮಾತನಾಡಿ, ಪ್ರತಿ ವರ್ಷ ಸಾವಿರಾರು ಮಕ್ಕಳು ಲೈಂಗಿಕ ಹಿಂಸೆ, ಕಳ್ಳಸಾಗಣೆ ಮತ್ತು ಬಾಲ್ಯವಿವಾಹದ ಬಲಿಯಾಗುತ್ತಿದ್ದಾರೆ ಎಂದರು.