ಪಾಕ್ ಅತಿಕ್ರಮಣದಿಂದ ಸಂಕಷ್ಟದಲ್ಲಿರುವ ಸರ್ವಜ್ಞಪೀಠ ರಕ್ಷಣೆಗೆ ಮನವಿಕಾಶ್ಮೀರದ ಹಿಂದೂಗಳ ಪವಿತ್ರ ಶ್ರದ್ಧಾಕೇಂದ್ರ ಸರ್ವಜ್ಞ ಪೀಠವನ್ನು ಪಾಕ್ ಸೇನೆ ಅತಿಕ್ರಮಿಸಿ ನಾಶಪಡಿಸಲು ಯತ್ನಿಸುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಹಾಗೂ ವಿದೇಶಾಂಗ ಸಚಿವರಿಗೆ ಜಗದ್ಗುರುಗಳ ಮೂಲಕವೂ ಒತ್ತಾಯ ಮಾಡಿದ್ದೇವೆ ಎಂದು ಕಾಶ್ಮೀರದ ಸೇವ್ ಶಾರದಾ ಸಮಿತಿ ಮುಖ್ಯಸ್ಥ ಶ್ರೀ ರವೀಂದ್ರ ಪಂಡಿತ್ ತಿಳಿಸಿದರು.