ಸ್ವ ಸಹಾಯ ಗುಂಪುಗಳಿಗೆ ಸಾಲ ಮಾಹಿತಿ ಮೇಳಕಮಲನಗರ ಪಟ್ಟಣದ ಡಾ.ಚನ್ನಬಸವೇಶ್ವರ ಮಠದಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ಲಕಪತಿ ದಿದಿ ಅಡಿಯಲ್ಲಿ ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕ್ ಸಾಲ ನೀಡುವ ಕುರಿತು ಸಾಲ ಮೇಳ ಜರುಗಿತು. ತಾಲೂಕು ಪಂಚಾಯಿತಿ ಅಧಿಕಾರಿ ಮಾಣಿಕರಾವ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಸ್ವ ಸಹಾಯ ಸಂಘದ ಮಹಿಳೆಯರು ಪ್ರತಿ ತಿಂಗಳು ಸಾಲ ಮರು ಪಾವತಿ ಮಾಡುವುದು, ದಾಖಲೆಗಳನ್ನು ಬರೆಯುವುದು, ಪ್ರತಿ ತಿಂಗಳು ಸಭೆ ಮಾಡುವುದು, ಚಟುವಟಿಕೆಗಳನ್ನು ಮಾಡುವುದರ ಮೂಲಕ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು