ಮಹಿಳೆಯರು ಸ್ವಉದ್ಯೋಗದಿಂದ ಅಭಿವೃದ್ಧಿಯಾಗಲಿಆಹಾರ ಪದಾರ್ಥ, ಕಸೂತಿ ಕಲೆ, ಖಾದ್ಯ, ಉಡುಪು ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿರುವ ಮಹಿಳೆಯರ ಕಲೆಗೆ ಪ್ರೋತ್ಸಾಹ ಕೊಡಬೇಕಿದೆ. ೨೫೦೦ಕ್ಕೂ ಅಧಿಕ ಸ್ವಸಹಾಯ ಸಂಘಗಳು ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಸಾಲಕ್ಕೆ ಸಬ್ಸಿಡಿ ದೊರಕಿದರೆ ಮತ್ತಷ್ಟು ಸಂಘಗಳ ಬಲವರ್ಧನೆಗೆ ಸಹಕಾರಿಯಾಗುತ್ತದೆ. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆ.