ಪ್ರತ್ಯೇಕ ಪಾಲಿಕೆಗೆ ಬೆಲ್ಲದ ಕೂಗು ಅಚ್ಚರಿ..!ಹಲವು ವರ್ಷಗಳ ಹೋರಾಟದ ಫಲವಾಗಿ ಪ್ರತ್ಯೇಕ ಪಾಲಿಕೆ ಕುರಿತು ಬೆಳಗಾವಿಯ ಅಧಿವೇಶನದಲ್ಲಿ ಚರ್ಚೆಗೆ ಬಂದಿದೆ. ಆದರೆ, ಬಿಜೆಪಿ ಸರ್ಕಾರದಲ್ಲಿಯೇ ಹೆಚ್ಚು ಮುನ್ನಲೆಗೆ ಬಂದ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಯ ಕೂಗಿಗೆ ಸ್ಪಂದಿಸದ ಶಾಸಕ ಅರವಿಂದ ಬೆಲ್ಲದ ಅಧಿವೇಶನದಲ್ಲಿ ಧ್ವನಿ ಎತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಹೋರಾಟ ಸಮಿತಿ ಸದಸ್ಯರು ಹೇಳಿದ್ದಾರೆ.