ಸರ್ವ ಧರ್ಮ ಸಮನ್ವಯ ದೀಪವು ಅಖಂಡ ಭಾರತದ ಬೆಳಕುಅಖಂಡ ಭಾರತಕ್ಕಾಗಿ ಒಂದು ದೀಪ ಬೆಳಗುವುದಾದರೆ ಅದು ಸರ್ವ ಧರ್ಮ ಸಮನ್ವಯ ದೀಪ ಎಂದು ಹಾರಕೂಡಿನ ಡಾ.ಚೆನ್ನವೀರ ಶಿವಚಾರ್ಯರು ನುಡಿದರು. ಕುರಾನ್ ಪ್ರವಚನದ 3ನೇ ದಿನದ ದಿವ್ಯ ಸಾನ್ನಿಧ್ಯ ವಹಿಸಿದ ಮಾತನಾಡಿದ ಅವರು, ಸನಾತನ ಸಾತ್ವಿಕ ಮೌಲ್ಯಗಳ ಆದಿಯಾಗಿ ಇಂದಿನ ವರೆಗೆ ಮನೂಕೂಲದ ಕಲ್ಯಾಣಕ್ಕಾಗಿ ಶ್ರಮಿಸಿದ ಎಲ್ಲ ಮತ, ಪಂತಗಳ ಮೂಲ ತೆರಳು ಸತ್ಯ ಮತ್ತು ದಯೆ ಹೃದಯ ವೈಶಾಲ್ಯದ ತಳಹದಿ ಮೇಲೆ ಮೌಢ್ಯ ರಹಿತವಾದ ದಿಗ್ ದರ್ಶನ ನೀಡುವದೆ ಧರ್ಮ ಎಂದು ತಿಳಿಸಿದರು. ರಾಮ ರಹೀಂ, ಬುದ್ಧ, ಬಸವೇಶ್ವರ, ಎಲ್ಲಾ ದಾರ್ಶನಿಕರು ತೋರಿದ ಮಾರ್ಗ ನಾವು ನಡೆದರೆ ಇಡಿ ವಿಶ್ವವೇ ಒಂದು ಪರಮಧಾಮವಾಗುವುದು ಎಂದರು