ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲಪುರಸಭೆ ಮಳಿಗೆಗಳ ಬಾಡಿಗೆ ಹಾಗೂ ಹರಾಜು, ಅಭಿವೃದ್ಧಿ ಕಾಮಗಾರಿ ಹಾಗೂ ಇತರೆ ೩೨ ವಿಷಯಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಪುರಸಭೆಯ ೧೭ ಮಳಿಗೆಗಳನ್ನು ಹರಾಜಿಗೆ ಇಟ್ಟಿದ್ದು, ಅದರಲ್ಲಿ ೬ ಮಾತ್ರ ಹರಾಜಾಗಿದೆ ಮತ್ತು ಉಳಿದ ಎಲ್ಲಾ ಮಳಿಗೆಗಳಿಗೆ ಪುನಃ ಹರಾಜು ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ ಎಂದರು. ಪುರಸಭೆಯ ೨೩ ಚುನಾಯಿತ ಸದಸ್ಯರಲ್ಲಿ ಪುರಸಭಾಧ್ಯಕ್ಷ ಸೇರಿದಂತೆ ಜೆಡಿಎಸ್‌ನ ೧೮ ಸದಸ್ಯರು ಇದ್ದರು, ಉಪಾಧ್ಯಕ್ಷೆ ಗೈರಾಗಿದ್ದರು ಮತ್ತು ಕಾಂಗ್ರೆಸಿನ ಸದಸ್ಯ ಬೈರಶೆಟ್ಟಿ ಹಾಗೂ ೫ ನಾಮ ನಿರ್ದೇಶನ ಸದಸ್ಯರು ಇದ್ದರು.