ಕೆಆರ್‌ಎಸ್‌ನ್ನು ಟಿಪ್ಪುಸುಲ್ತಾನ್ ಸಾಗರ ಮಾಡುವ ಹುನ್ನಾರ: ಆರ್.ಅಶೋಕ್ನಾಲ್ವಡಿ ಅವರ ಹೆಸರಿಗೆ ಕಾಂಗ್ರೆಸ್ ಪಕ್ಷದಿಂದ ಪದೇ ಪದೇ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವಡಿ ಅವರಿಗಿಂತ ಹೆಚ್ಚು ಅಭಿವೃದ್ಧಿ ಮಾಡಿರುವುದಾಗಿ ದುರಹಂಕಾರದ ಮಾತುಗಳನ್ನಾಡಿದರೆ, ಮಹದೇವಪ್ಪ ಕೃಷ್ಣರಾಜಸಾಗರಕ್ಕೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಹೇಳುವ ಮೂಲಕ ಕೃಷ್ಣರಾಜಸಾಗರ ಹೆಸರನ್ನೇ ಬದಲಿಸುವುದಕ್ಕೆ ಕಾಂಗ್ರೆಸ್‌ನವರು ಚಾಲನೆ ಕೊಟ್ಟಿದ್ದಾರೆ.