ಹೆಣ್ಣನ್ನು ಸುರಕ್ಷಿತವಾಗಿರಿಸಲು ಅನೇಕ ಕಾಯ್ದೆಗಳು ರಚನೆ: ನ್ಯಾ. ಹನುಮಂತಪ್ಪಚಿಕ್ಕಮಗಳೂರು, ಹೆಣ್ಣು ಸಮಾಜದ ಕಣ್ಣು. ದೇಶದ ವಿವಿಧ ಸ್ಥರಗಳಲ್ಲಿ ಮಹಿಳೆಯರು ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಮಾದರಿಯಾಗಿದ್ದು, ಹೆಣ್ಣನ್ನು ತಿರಸ್ಕರಿಸುವ ಅಥವಾ ಅಸಡ್ಡೆ ತೋರುವ ಆಲೋಚನೆ ಪಾಲಕರು ಬಿಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ ಹೇಳಿದರು.