ಕಾಶ್ಮೀರಕ್ಕೂ ಮಂಗಳೂರಿಗೂ ವ್ಯತ್ಯಾಸ ಉಳಿದಿಲ್ಲ: ನಳಿನ್ ಕುಮಾರ್ ಕಟೀಲ್ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಲೆಲ್ಲಾ ಭಯೋತ್ಪಾದಕರಿಗೆ ಶಕ್ತಿ ತುಂಬುವ ಕೆಲಸಗಳು ನಡೆಯುತ್ತಿವೆ. ರಾಜ್ಯದಲ್ಲಿ ಸಿದ್ದರಾಮಣ್ಣ ಸಿಎಂ ಆಗಿದ್ದಾಗಲೆಲ್ಲಾ ಹಿಂದೂಗಳ ಕಗ್ಗೊಲೆ ರಾಜಕಾರಣ ಮಾಡಿದ್ದಾರೆ. ಹಿಂದಿನ ಸರ್ಕಾರದಲ್ಲಿ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ದೀಪಕ್ ರಾವ್ ಹತ್ಯೆಯಾಗಿತ್ತು. ಈ ಬಾರಿ ಬೆಳಗಾವಿಯ ಜೈನ ಮುನಿ ಹತ್ಯೆಯಿಂದ ಸುಹಾಸ್ ಶೆಟ್ಟಿ ವರೆಗೆ ಕಗ್ಗೊಲೆಗಳಾಗಿವೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.