ಶರಾವತಿ ಪಂಪ್ಡ್ ಸ್ಟೋರೇಜ್ ಬಿಜೆಪಿಯ ಯೋಜನೆಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪ್ರಸ್ತಾಪ ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿದ್ದು, ಆದರೂ ಕಾಂಗ್ರೆಸ್ ನವರು ಈ ಯೋಜನೆಯಲ್ಲಿ ಹಣ ಹೊಡೆದಿದ್ದಾರೆನ್ನುವ ಕೂಗಾಟ ನಡೆದಿದೆ. ಹಾಗಾದರೆ ಈ ಹಿಂದೆ ತಾವೇ ತಂದ ಯೋಜನೆಗಳಲ್ಲಿ ಬಿಜೆಪಿಯವರು ಹಣ ಹೊಡೆದಿದ್ದರೆ ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿರುಗೇಟು ನೀಡಿದರು.