ವರಮಹಾಲಕ್ಷ್ಮೀ ಹಬ್ಬಕ್ಕೆ ಸೇವಂತಿಗೆ ಹೂ ಖರೀದಿಪ್ರತಿ ವರ್ಷದಂತೆ ಈ ವರ್ಷವು ಕೂಡ ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧೆ ಭಕ್ತಯಿಂದ ಜನತೆ ಆಚರಿಸುತ್ತಿದ್ದು, ಹಬ್ಬದ ವ್ಯಾಪಾರಕ್ಕಾಗಿ ಒಂದು ದಿವಸದ ಮೊದಲೆ ಗುರುವಾರದಂದು ನಗರದ ಮುಖ್ಯ ಮಾರುಕಟ್ಟೆಯಲ್ಲಿ ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವ್ಯಾಪಾರ ಮಾಡಲು ಮುಗಿ ಬಿದ್ದಿದ್ದರು.ನಗರದ ಮಹಾವೀರ ವೃತ್ತ, ಕಸ್ತೂರಬಾ ರಸ್ತೆ, ಕಟ್ಟಿನಕೆರೆ ಮಾರುಕಟ್ಟೆ, ಬಿ.ಎಂ. ರಸ್ತೆ, ಸಾಲಗಾಮೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ವ್ಯಾಪಾರ ಜೋರಾಗಿಯೇ ನಡೆಯಿತು. ಪ್ರಮುಖವಾಗಿ ಸೇವಂತಿಗೆ ಒಂದು ಮಾರಿಗೆ ೧೦೦ರಿಂದ ೧೫೦ ರೂಗಳಿದ್ದು, ಪುಟ್ಟಬಾಳೆ ಒಂದು ಕೆಜಿಗೆ ೧೨೦ರಿಂದ ೧೫೦ ರು. ಗಳು, ತಾವರೆ ಎರಡಕ್ಕೆ ೧೦೦ರಿಂದ ೧೨೦, ಸೇಬು ಒಂದು ಕೆಜಿಗೆ ೧೦೦ರಿಂದ ೨೦೦ ಇತ್ತು.