ಕಡಬ ಪೇಟೆಯಲ್ಲಿ ರಸ್ತೆ ತಡೆ-ಪ್ರತಿಭಟನೆ, ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ದಲ್ಲಿ ಜಮಾಯಿಸಿದ ಕಾರ್ಯಕರ್ತರು ಬಳಿಕ ಪೇಟೆಯ ಪಂಜ ಕ್ರಾಸ್ ಬಳಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು. ಕಡಬ ಪೇಟೆ ಸೇರಿದಂತೆ ತಾಲೂಕಿನ ಆಲಂಕಾರು ,ಪೆರಾಬೆ, ನೂಜಿಬಾಳ್ತಿಲ, ರಾಮಕುಂಜ, ಕೊಯಿಲ, ಸವಣೂರು, ಕಾಣಿಯೂರು ಮೊದಲಾದ ಗ್ರಾಮೀಣ ಭಾಗದಲ್ಲಿ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ತಾಲೂಕಿನಾದ್ಯಂತ ಮೆಡಿಕಲ್, ಹಾಲು ಮತ್ತಿತರ ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿದ್ದವು. ಸರ್ಕಾರಿ ಕಚೇರಿ, ಬ್ಯಾಂಕ್ ಗಳು ಎಂದಿನಂತೆ ತೆರೆದು ಸೇವೆ ನೀಡಿದವು. ವಾಹನ ಸಂಚಾರ ವಿರಳವಾಗಿತ್ತು. ಜನರ ಒಡಾಟವೂ ಕಡಿಮೆಯಿತ್ತು.