ಇಂದಿನಿಂದ ಆಲಕೆರೆಯಲ್ಲಿ ಶ್ರೀವೀರಭದ್ರೇಶ್ವರಸ್ವಾಮಿ ಕೊಂಡ-ಬಂಡಿ ಉತ್ಸವಈ ಹಬ್ಬವು 1967,1982 ಹಾಗೂ 2001ರಲ್ಲಿ ಅದ್ಧೂರಿಯಾಗಿ ಜರುಗಿದ್ದು, 2020ರಲ್ಲಿ ಕೊರೊನಾದಿಂದಾಗಿ ಮುಂದೂಡಲಾಗಿದ್ದ ಹಬ್ಬವು ಇದೀಗ ಮತ್ತೆ ಗ್ರಾಮಸ್ಥರು ಹಾಗೂ ಭಕ್ತರ ಸಡಗರ ಸಂಭ್ರಮಾಚರಣೆಯೊಂದಿಗೆ ನಡೆಯಲು ಸಜ್ಜಾಗಿದೆ. ಮೇ 5 ರಂದು ಬೆಳಗ್ಗೆ 5 ರಿಂದ ಗಂಗಾ ಪೂಜೆ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದು ಮಧ್ಯಾಹ್ನ 12 ಗಂಟೆಗೆ ಹೊಸ ನೀರು ತರುವರು.