ಔಷಧಗಳು, ರಕ್ತದ ಮಾದರಿ ಪರೀಕ್ಷಾ ಕಿಟ್ ಸೇರಿ ಅಗತ್ಯ ವೈದ್ಯಕೀಯ ಪರಿಕರವನ್ನು ಸೂಕ್ತ ಸಮಯಕ್ಕೆ ಸುರಕ್ಷಿತವಾಗಿ ಡ್ರೋನ್ ಮೂಲಕ ಸಾಗಿಸುವ ಪ್ರಾಯೋಗಿಕ ಯೋಜನೆಯನ್ನು ನಾರಾಯಣ ಹೆಲ್ತ್‌ನ ಪಾಲುದಾರಿಕೆಯೊಂದಿಗೆ ಏರ್‌ಬೌಂಡ್ ಕಂಪನಿ ಕೈಗೊಂಡಿದೆ.
ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಾಗಿ ಆರ್‌ಬಿಐ ಆರಂಭಿಸಿದ ತಕ್ಷಣದ ಚೆಕ್ ನಗದೀಕರಣದ ಪ್ರಕ್ರಿಯೆಗೆ ತಾಂತ್ರಿಕ ಅಡಚಣೆ ಎದುರಾಗಿದ್ದರಿಂದ ಉದ್ಯಮ ವಲಯ ತತ್ತರಿಸಿದ್ದು, ಕಳೆದ 10 ದಿನಗಳಿಂದ ಬ್ಯಾಂಕ್‌ಗಳಿಗೆ ಹಾಜರುಪಡಿಸಿದ ಚೆಕ್‌ಗಳು ಇದುವರೆಗೆ ನಗದೀಕರಣಗೊಳ್ಳದೆ ವ್ಯವಹಾರಕ್ಕೆ ಅಡಚಣೆ
ಕೋಲಾರ ಜಿಲ್ಲೆ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅವರ ಶಾಸಕ ಸ್ಥಾನ ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಚುನಾವಣಾ ಆಯೋಗಕ್ಕೆ ಮರುಮತ ಎಣಿಕೆ ಮಾಡುವಂತೆ ಮಹತ್ವದ ಸೂಚನೆ ನೀಡಿದೆ.
ರಾಜಧಾನಿ ರಸ್ತೆ ಗುಂಡಿ, ಕಸ ವಿಲೇವಾರಿ ಸಮಸ್ಯೆ ಬಗ್ಗೆ ಪುನಃ ಉದ್ಯಮಿಗಳು ಹಾಗೂ ಸರ್ಕಾರದ ಜಟಾಪಟಿ ನಡೆದಿದೆ. ಉದ್ಯಮಿ ಕಿರಣ್ ಮಜುಂದಾರ್ ಶಾ ರಸ್ತೆಗುಂಡಿ ಬಗ್ಗೆ ಕಿಡಿಕಾರಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 1,200 ಚದರಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಿರ್ಮಿಸಿರುವ ನೆಲ ಮತ್ತು 2 ಅಂತಸ್ತು, ಸ್ಟಿಲ್ಟ್ ಮತ್ತು 3 ಅಂತಸ್ತಿನ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ (ಒ.ಸಿ.) ಪಡೆಯುವುದರಿಂದ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.