ಆರತಿ ಬೆಳಗಿ, ತಿಲಕ ಇರಿಸಿ, ರಕ್ಷಾ ಬಂಧನ ಆಚರಿಸಿದ ಚಿಣ್ಣರುಪುಟ್ಟ ಪುಟ್ಟ ಪುಟಾಣಿಗಳೇ ತುಂಬಿರುವ ಈ ಪ್ಲೇ ಸ್ಕೂಲ್‌ನಲ್ಲಿ ಶನಿವಾರ ಸಂಭ್ರಮ ಸಡಗರ ಮನೆಮಾಡಿತ್ತು. ಪುಷ್ಪಾಲಂಕೃತ ದೀವಿಗೆಯ ಸುತ್ತ ರಕ್ಷೆಯನ್ನಿಟ್ಟು ಆರತಿ ಬೆಳಗಿದ ಬಳಿಕ ತಿಲಕವಿಟ್ಟು,ಪರಸ್ಪರ ರಕ್ಷೆಯನ್ನು ಕಟ್ಟಿಕೊಂಡು ಪುಟಾಣಿಗಳು ಸಂಭ್ರಮಿಸಿದರು. ಜೊತೆಗೆ ಒಬ್ಬರಿಗೊಬ್ಬರು ಸಿಹಿತಿಂಡಿ ಹಂಚಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದರು. ಹಿರಿಯರು ಅಕ್ಷತೆಯ ಮೂಲಕ ಹರಸಿದರು.