ಮುಧೋಳ ತಾಲೂಕಾಸ್ಪತ್ರೆಗೆ ಲೋಕಾಯುಕ್ತರ ಭೇಟಿಮುಧೋಳ ನಗರದ ತಾಲೂಕು ಆಸ್ಪತ್ರೆಗೆ ಲೋಕಾಯುಕ್ತ ಬಾಗಲಕೋಟೆ ಜಿಲ್ಲೆಯ ಡಿವೈಎಸ್ಪಿ ಸುರೇಶ ರೆಡ್ಡಿ ಅವರು ಶನಿವಾರ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಒಪಿಡಿ, ಬಾಣಂತಿಯರ ವಾರ್ಡ್, ಜನರಲ್ ವಾರ್ಡ್, ಶಸ್ತ್ರಚಿಕಿತ್ಸಾ ವಿಭಾಗ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ನೊಂದಣಿ ಕೇಂದ್ರಕ್ಕೆ ಮತ್ತು ಫಾರ್ಮಸಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು.