ಫೈರ್ ಸೇಫ್ಟಿ ಕ್ಲಿಯರೆನ್ಸ್‌ಗೆ ಸಮಾನ ಸಮಯಾವಕಾಶ ನೀಡಿಎನ್.ಬಿ.ಸಿ ಕೋಡ್ (National Building Code) ಪ್ರಕಾರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಒಂದೇ ನಿಯಮ ಇದೆ ಹಾಗಾಗಿ ತಾರತಮ್ಯ ಮಾಡದೇ ಸರ್ಕಾರಿ ಆಸ್ಪತ್ರೆಗೆ ಫೈರ್ ಕ್ಲಿಯರೆನ್ಸ್ ಗೆ ಎಷ್ಟು ಸಮಯವಕಾಶ ನೀಡಲಾಗುತ್ತಿದೆಯೊ ಖಾಸಗಿ ಆಸ್ಪತ್ರೆಗಳಿಗೂ ಅಷ್ಟೇ ಸಮಯವಕಾಶ ನೀಡಿ, ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚು ಕಾಲಾವಕಾಶ ನೀಡಿ ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಕಾಲಾವಕಾಶ ನೀಡಲಾಗುತ್ತಿದೆ ಎಂದು ಸೋಮವಾರ ವಿಧಾನ ಪರಿಷತ್ತಿನಲ್ಲಿ ನಡೆದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಆರೋಗ್ಯ ಸಚಿವರ ಗಮನ ಸೆಳೆದರು.