ಮಠದ ಕೇರಿಯಲ್ಲಿ ಇರುವ ರಾಘವೇಂದ್ರ ಸ್ವಾಮಿಗಳ ಮಠಕ್ಕೆ 273 ವರ್ಷ!ಪಟ್ಟಣದ ಮಠದ ಕೇರಿಯಲ್ಲಿ ಇರುವ ರಾಘವೇಂದ್ರ ಸ್ವಾಮಿಗಳ ಮಠ 1752ರಲ್ಲಿ ಸ್ಥಾಪನೆಯಾಗಿದ್ದು, ನಾಳೆ ಭಾನುವಾರ (ಆ.10)ಕ್ಕೆ ಬರೋಬ್ಬರಿ 273 ವರ್ಷ ತುಂಬುತ್ತಿವೆ. ಈ ಹಿನ್ನಲೆಯಲ್ಲಿ ಆ.10 ರಿಂದ 12ರ ವರೆಗೆ ರಾಯರ ಆರಾಧನೆ ಭಕ್ತಿ ಶ್ರದ್ಧೆಯಿಂದ ಜರುಗಲಿದೆ.