ಬನ್ನಿ ಕಡಿದು ಮರಸು ದಸರಾಕ್ಕೆ ತೆರೆಮರಸು ಗ್ರಾಮದಲ್ಲಿ ವೈಭವದ ದಸರಾ ಮಹೋತ್ಸವ ಬನ್ನಿ ಮಂಟಪದಲ್ಲಿ ಬನ್ನಿ ಮುರಿಯುವುದರೊಂದಿಗೆ ಮುಕ್ತಾಯಗೊಂಡಿತು. ಸುಮಾರು ೮೦೦ ವರ್ಷಗಳ ಇತಿಹಾಸವಿರುವ ಮರಸು ಗ್ರಾಮದಲ್ಲಿ, ಮೈಸೂರಿನಲ್ಲಿ ದಸರಾ ನಡೆಯುವಂತೆ ಇಲ್ಲಿಯೂ ನಡೆಯುವುದರಿಂದ ಪ್ರಖ್ಯಾತಿ ಪಡೆದಿದೆ. ಬನ್ನಿ ಮಂಟಪದ ಮುಂದೆ ಬನ್ನಿಸೊಪ್ಪು, ಬಾಳೆಕಂದನ್ನು ನೆಟ್ಟು, ಮೊದಲು ಪಟೇಲ ವಂಶಸ್ಥರಾದ ಎಂ. ಕೆ. ಸುಪ್ರೀತ್ ಬಿಲ್ಲು ಬಾಣದಿಂದ, ನಂತರ ವಿಶ್ವಕರ್ಮ ವಂಶಸ್ಥರಾದ ಎಂ. ಪಿ. ಹರೀಶ್ ಬಂದೂಕಿನಿಂದ ಗುರಿಯಿಟ್ಟು ಗುಂಡು ಹಾರಿಸಿ ಬನ್ನಿಕಂಬವನ್ನು ತುಂಡು ಮಾಡಿದರು.