ದೇವೇಗೌಡರ ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು ವಿತರಣೆಎಚ್.ಡಿ. ದೇವೇಗೌಡರ ೯೩ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದು ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ ತಿಳಿಸಿದರು. ದೇವೇಗೌಡರ ಜನ್ಮದಿನ ಪ್ರಯುಕ್ತ ತಾಲೂಕು ಜೆಡಿಎಸ್ ವತಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣುಗಳು ಹಾಗೂ ಬ್ರೆಡ್ ವಿತರಿಸಿ ಮಾತನಾಡಿದರು. ಗೌಡರಿಗೆ ದೇವರು ಇನ್ನಷ್ಟು ಆರೋಗ್ಯ, ಆಯಸ್ಸು, ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಹಾಗೂ ತಾಲೂಕಿನ ಎಲ್ಲಾ ನಾಗರಿಕ ಪರವಾಗಿ ಜನ್ಮ ದಿನ ಶುಭಾಶಯವನ್ನು ಕೋರುತ್ತೇವೆ ಎಂದರು.