ಸೆ.8 ಕ್ಕೆ ಟಿಬಿ ಡ್ಯಾಮ್ ಬಳಿ ರೈತರಿಂದ ಬೃಹತ್ ಹೋರಾಟತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ಗಳ ಬದಲಾವಣೆ ವಿಚಾರದಲ್ಲಿ ತೋರಿರುವ ನಿರ್ಲಕ್ಷ್ಯ ಧೋರಣೆ, ಹೂಳಿನ ಸಮಸ್ಯೆ, ಅಕ್ರಮ ನೀರಾವರಿ, ಸಮತೋಲನ ಜಲಾಶಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವುದರ ಕುರಿತು ಟಿಬಿ ಡ್ಯಾಮ್ ಅಧಿಕಾರಿಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರ ಇದೇ ಆ.31 ರೊಳಗೆ ತುಟಿಬಿಚ್ಚಬೇಕು ಇಲ್ಲವಾದಲ್ಲಿ ಸೆ.8 ರಂದು ಟಿಬಿ ಡ್ಯಾಮ್ ಬಳಿ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತರು ಬೃಹತ್ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಎಚ್ಚರಿಸಿದರು.