ಮಾಜಿ ವಿಪ ಸದಸ್ಯ ನರೇಂದ್ರ ಖೇಣಿ ನಿಧನಮಾಜಿ ವಿಧಾನ ಪರಿಷತ್ ಸದಸ್ಯ ನರೇಂದ್ರ ಖೇಣಿ (89) ಅಕ್ಟೋಬರ್ 8 ರಂದು ನಿಧನ ಹೊಂದಿದ್ದಾರೆ. ನರೇಂದ್ರ ಖೇಣಿಯವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. ಅವರ ಅಂತ್ಯಕ್ರಿಯೆ ಅವರ ಸ್ವ ಗ್ರಾಮ ರಂಜೋಳ ಖೇಣಿ ಗ್ರಾಮದಲ್ಲಿ ಅಕ್ಟೋಬರ್ 10 ರಂದು ಮಧ್ಯಾಹ್ನ 2 ಗಂಟೆಗೆ ನೆರವೇರಿಸಲು ಕುಟುಂಬ ವರ್ಗದವರು ನಿರ್ಧರಿಸಿದ್ದಾರೆ. ಮೃತರು ಮಕ್ಕಳಾದ ರಾಜೇಶ್ ಖೇಣಿ, ಮಹೇಶ್ ಖೇಣಿ. ಶರ್ಮಿಳಾ, ಖೇಣಿ ಕುಟುಂಬ ವರ್ಗ ಮತ್ತು ಬಂಧು ಮಿತ್ರರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.