ಕೆರೆ ಸಂರಕ್ಷಣೆಗಾಗಿ ತೆಪ್ಪದಲ್ಲಿ ಕುಳಿತು ದಿನಪೂರ್ತಿ ಉಪವಾಸದೊಡ್ಡಬಳ್ಳಾಪುರ: ಇಲ್ಲಿನ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ, ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯ್ತಿ ಕೆರೆ ಹೋರಾಟ ಸಮಿತಿ ನೇತೃತ್ವದಲ್ಲಿ ಗಾಂಧಿ ಜಯಂತಿ ಅಂಗವಾಗಿ ಕೆರೆ ನೀರು ಸಂರಕ್ಷಣೆಗಾಗಿ ಒತ್ತಾಯಿಸಿ ತೆಪ್ಪದಲ್ಲಿ ಕುಳಿತು ದಿನಪೂರ್ತಿ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ವಿನೂತನ ಪ್ರತಿಭಟನೆ ಬುಧವಾರ ನಡೆಯಿತು.