3 ರಿಂದ ಅದ್ಧೂರಿ ಹಾರೋಹಳ್ಳಿ ದಸರಾ ಮಹೋತ್ಸವಹಾರೋಹಳ್ಳಿ: ಗ್ರಾಮೀಣ ಪರಂಪರೆ ಮತ್ತು ಸಂಸ್ಕೃತಿಯನ್ನು ವಿಭಿನ್ನ ಸಾಂಸ್ಕೃತಿಕ ಕಲಾ ಮಾಧ್ಯಮದ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ವರ್ಣರಂಜಿತ ಮತ್ತು ವೈಭವಯುತ 8ನೇ ವರ್ಷದ ಹಾರೋಹಳ್ಳಿ ದಸರಾ ಮಹೋತ್ಸವವು ಅ.3 ರಿಂದ ಅ.11ರವರೆಗೆ 9 ದಿನಗಳ ಕಾಲ ನವದುರ್ಗಿ ಮಾತೆಯರ ಪ್ರತಿಷ್ಠಾಪನೆ ಮತ್ತು ಆರಾಧನೆ ನಡೆಯಲಿದ್ದು, ಅ.12ರಂದು ಪಟ್ಟಣದಲ್ಲಿ ಅದ್ಧೂರಿ ದಸರಾ ಮಹೋತ್ಸವ ನಡೆಯಲಿದೆ ಎಂದು ಚಾಮುಂಡೇಶ್ವರಿ ಅಮ್ಮನವರ ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಗೌತಮ್ ಗೌಡ ತಿಳಿಸಿದರು.