ದಿನಬಳಕೆ ವಸ್ತುಗಳ ಮೇಲೂ ಜಿಎಸ್ಟಿ: ಸುರೇಶ್ ವಾಗ್ದಾಳಿರಾಮನಗರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದಿನ ಬಳಕೆ ವಸ್ತುಗಳಿಗೂ ಜಿಎಸ್ಟಿ, ರೈತ ಬಳಸುವ ಕೀಟನಾಶಕ, ಗೊಬ್ಬರದ ಮೇಲೂ ಜಿಎಸ್ಟಿ ವಿಧಿಸಲಾಗುತ್ತಿದೆ. ರೈತರ ಮಕ್ಕಳೆನ್ನುವವರು ನಿಮ್ಮಪರ ಹೋರಾಟ ಮಾಡದೆ ಅವರ ಜೊತೆ ಶಾಮೀಲಾಗುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಜೆಡಿಎಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.