ಸಂವಿಧಾನ ಬದಲಾಯಿಸ ಹೊರಟರೆ ಹೋರಾಟರಾಮನಗರ: ದೇಶ, ರಾಜ್ಯವನ್ನಾಳಿದ ಎಲ್ಲಾ ಪಕ್ಷಗಳು ದಲಿತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಾ ಬಂದಿದೆ. ಈಗ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಿವೆ. ಅಂತಹ ಸಂದರ್ಭ ಬಂದರೆ ಮತ್ತೊಂದು ಭೀಮಾ ಕೋರೆಗಾಂವ್ ಹೋರಾಟ ಮಾಡಬೇಕಾಗುತ್ತದೆ ಎಂದು ಸಮತಾ ಸೈನಿಕದಳ ರಾಜ್ಯ ಕಾರ್ಯಾಧ್ಯಕ್ಷ ಡಾ. ಜಿ.ಗೋವಿಂದಯ್ಯ ಎಚ್ಚರಿಸಿದರು.