ಉತ್ತರ ಕರ್ನಾಟಕದ ಲಿಂಗಾಯತ ಗಾಣಿಗರು ನಮ್ಮ ಮೀಸಲಾತಿಯನ್ನು ಕಸಿದುಕೊಳ್ಳುತ್ತಾರೆವಿಧಾನಸಭೆ, ವಿಧಾನಪರಿಷತ್ತು, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಮುದಾಯವನ್ನು ಪ್ರತಿನಿಧಿಸಲು ಜನಪ್ರತಿನಿಧಿಗಳು ಇಲ್ಲ. ನಮ್ಮ ಪರ ಧ್ವನಿ ಎತ್ತುವವರಿಲ್ಲದೆ ನಾವು ಸೊರಗುತ್ತಿದ್ದೇವೆ. ಸೌಕರ್ಯಗಳಿಂದ ವಂಚಿತರಾಗಿದ್ದೇವೆ. ಹೀಗಾಗಿ ಎಲ್ಲರನ್ನು ಒಗ್ಗೂಡಲು ಜ.೧೧ ರಂದು ನೆಲಮಂಗಲದ ಮಠದಲ್ಲಿ ಗಾಣಿಗರ ಹಬ್ಬ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಬ್ಬವನ್ನು ಉದ್ಘಾಟಿಸಲಿದ್ದಾರೆ ಎಂದು ಪೂಣಾರ್ನಂದಪುರಿ ಸ್ವಾಮೀಜಿ ತಿಳಿಸಿದರು.