ಮಕ್ಕಳ ಮನಸ್ಸಿನಲ್ಲಿ ಕನ್ನಡ ಬಿತ್ತಲು ಪ್ರಯತ್ನಿಸಿತೀರ್ಥಹಳ್ಳಿ: ಪ್ರಸ್ತುತ ಕನ್ನಡ ನಾಡಿನ ಮಧ್ಯಮ ವರ್ಗ ಇಂಗ್ಲೀಷ್ ಭಾಷೆಯ ಹಿಂದೆ ಬಿದ್ದಿದ್ದು, ಭಾಷೆ ಮತ್ತು ಶಿಕ್ಷಣ ವ್ಯಾಪಾರಿ ಸರಕುಗಳಾಗಿವೆ. ಇಲ್ಲಿ ಉಪಯುಕ್ತತೆಯೇ ಮಾನದಂಡವಾಗಿರುವ ಕಾರಣ ಕನ್ನಡ ಅನ್ನದ ಭಾಷೆಯಾಗಿಲ್ಲ. ಈ ಹಂತದಲ್ಲಿ ಕನ್ನಡಿಗರಾದ ನಾವುಗಳು ಕೈ ಚೆಲ್ಲಿ ಕೂರದೇ ಕನ್ನಡದ ಬೀಜವನ್ನು ಎಳವೆಯಲ್ಲೇ ಮಕ್ಕಳ ಮನಸ್ಸಿನಲ್ಲಿ ಕನ್ನಡವನ್ನು ಬಿತ್ತುವ ಪ್ರಯತ್ನ ಮಾಡಬೇಕಿದೆ ಎಂದು ತಾಲೂಕಿನ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ, ಸಾಹಿತಿ ಕೆ.ಆರ್.ಉಮಾದೇವಿ ಉರಾಳ್ ಹೇಳಿದರು.