• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • shivamogga

shivamogga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
3000 ಹಾಫ್‌ ಹೆಲ್ಮೆಟ್‌, 70 ಸೈಲೆನ್ಸರ್‌ಗಳ ತಿಂದು ತೇಗಿದ ರೋಡ್‌ ರೋಲರ್‌!
ಶಿವಮೊಗ್ಗ ನಗರದಲ್ಲಿ ವಶಪಡಿಸಿಕೊಂಡಿದ್ದ ಹಾಫ್‌ ಹೆಲ್ಮೆಟ್‌ಗಳು, ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ಗುರುವಾರ ಸಂಜೆ ಸಂಚಾರ ಠಾಣೆ ಪೊಲೀಸರು ಗೋಪಿ ಸರ್ಕಲ್‌ನಲ್ಲಿ ರೋಡ್‌ ರೋಲರ್‌ ಹತ್ತಿಸಿ, ನಾಶಪಡಿಸಿದರು. ಗೋಪಿ ಸರ್ಕಲ್‌ನಲ್ಲಿ ಎಲ್ಲವನ್ನು ಸಾಲಾಗಿ ಜೋಡಿಸಿ, ಅವುಗಳ ಮೇಲೆ ರೋಡ್‌ ರೋಲರ್‌ ಹತ್ತಿಸಲಾಯಿತು. ಈ ಸಂದರ್ಭ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಸಂತೋಷ್‌ಕುಮಾರ್‌ ಸೇರಿದಂತೆ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆ ಸಿಬ್ಬಂದಿ ಇದ್ದರು. ಕಾರ್ಯಾಚರಣೆ ವೀಕ್ಷಿಸಲು ಗೋಪಿ ಸರ್ಕಲ್‌ನಲ್ಲಿ ದೊಡ್ಡ ಸಂಖ್ಯೆಯ ಜನರು ಜಮಾಯಿಸಿದ್ದರು.
ಕನ್ನಡಗರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು: ಡಾ.ಪದ್ಮಪ್ರಸಾದ್
ರಾಜ್ಯದಲ್ಲಿ ವಿವಿಧ ಉದ್ದಿಮೆಗಳಲ್ಲಿ ಕನ್ನಡಗರಿಗೆ ಉದ್ಯೋಗವಕಾಶ ಕಲ್ಪಿಸುವ ಕುರಿತು ಡಾ.ಸರೋಜಿನಿ ಮಹಿಷಿ ವರದಿ ಪ್ರಕಟವಾಗಿ 40 ವರ್ಷಗಳೇ ಕಳೆದಿವೆ. ಆದರೆ, ಇದರ ಪರಿಣಾಮ ಮಾತ್ರ ಶೂನ್ಯ. ಇದಕ್ಕೆ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯೇ ಮುಖ್ಯ ಕಾರಣ. ಪರನಾಡಿನವರು ಇಲ್ಲಿ ಸ್ಥಾಪಿಸಿರುವ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಕ್ಕಿರುವುದು ಕೇವಲ ಶೇ.20ರಷ್ಟು ಮಾತ್ರ. ಅದು ಸಾಫ್ಟ್‌ವೇರ್‌ ಉದ್ದಿಮೆಗಳಲ್ಲಿ. ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿ ಮೇಲೆ ಆಗುತ್ತಿರುವ ಆಕ್ರಮಣ ಎಂದು ಶಿವಮೊಗ್ಗ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೆಳನದ ಸಮ್ಮೇಳನಾಧ್ಯಕ್ಷ ಡಾ. ಎಸ್.ಪಿ. ಪದ್ಮಪ್ರಸಾದ್ ವಿಷಾದ ವ್ಯಕ್ತಪಡಿಸಿದರು.
ನೂತನ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರ ಸ್ವೀಕಾರ
ಶಿವಮೊಗ್ಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಆಗಿ ನೇಮಕಗೊಂಡಿರುವ ಗುರುದತ್ತ ಹೆಗಡೆ ಬುಧವಾರ ಅಧಿಕಾರ ವಹಿಸಿಕೊಂಡರು. ಬೆಳಗ್ಗೆ ಅಧಿಕಾರ ಸ್ವೀಕರಿಸಿದ ಬಳಿಕ ಕಚೇರಿಯ ಎಲ್ಲ ವಿಭಾಗಕ್ಕೂ ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಜಿಲ್ಲೆಯ ಎಲ್ಲ ಇಲಾಖೆ ಅಧಿಕಾರಿಗಳು ಡಿಸಿ ಗುರುದತ್ತ ಹೆಗಡೆ ಅವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
ಶಂಕಿತ ನಕ್ಸಲ್‌ ಕೃಷ್ಣಮೂರ್ತಿ ಕೋರ್ಟ್‌ಗೆ: 2 ಪ್ರಕರಣ ವಿಚಾರಣೆ
ಕೇರಳ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಮಾವೋವಾದಿ ಶಂಕಿತ ನಕ್ಸಲ್‌ ಕೃಷ್ಣಮೂರ್ತಿಯನ್ನು ತೀರ್ಥಹಳ್ಳಿ ಪೊಲೀಸರು ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯ ಎದುರು ಬುಧವಾರ ಹಾಜರುಪಡಿಸಿದರು. ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ಮಂಗಳವಾರ ರಾತ್ರಿ ಬಿ.ಜಿ. ಕೃಷ್ಣಮೂರ್ತಿಯನ್ನು ಶಿವಮೊಗ್ಗಕ್ಕೆ ಪೊಲೀಸರು ಕರೆತಂದಿದ್ದಾರೆ. ಬುಧವಾರ ಬೆಳಗ್ಗೆ ಕಲಾಪ ಆರಂಭ ಆಗುತ್ತಿದ್ದಂತೆ ಪೊಲೀಸರು 2007ರಲ್ಲಿ ಹೊಸಗದ್ದೆಯಲ್ಲಿ ಬಸ್ ಸುಟ್ಟ ಪ್ರಕರಣ, 2009ರಲ್ಲಿ ಅರಣ್ಯ ಗೇಟ್ ಧ್ವಂಸ ಹಾಗೂ ಬಿದರಗೋಡು ಅರುಣಕುಮಾರ್ ಮನೆಯಲ್ಲಿ ಜೀಪ್ ಸುಟ್ಟು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಿದರು.
ರಕ್ತದಾನದಿಂದ ಜೀವ ಉಳಿಸಿದ ಪುಣ್ಯ ಗಳಿಸಲು ಸಾಧ್ಯ
ರಕ್ತಹೀನತೆ, ವಿವಿಧ ಕಾಯಿಲೆಗಳಿಂದ ಬಳಲುವವರು ಮತ್ತು ಅಪಘಾತದಂತಹ ತುರ್ತು ಸಂದರ್ಭಗಳಿಗೆ ರಕ್ತದ ಅಗತ್ಯತೆ ಇರುತ್ತದೆ. ರಕ್ತದಾನದ ಬಗ್ಗೆ ಅನೇಕರಿಗೆ ತಪ್ಪು ಕಲ್ಪನೆಗಳಿವೆ. ಇದರಿಂದಾಗಿ ಬಹುತೇಕರು ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ. ಆದರೆ, ರಕ್ತದಾನ ಮಾಡುವುದರಿಂದ ಯಾವುದೇ ಹಾನಿಯಿಲ್ಲ. ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರಿಂದ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ರಿಯಲ್ಲಿ ಬುಧವಾರ ಹೇಳಿದ್ದಾರೆ.
ಶಿಕಾರಿಪುರ ಡಿಸಿಸಿ ಬ್ಯಾಂಕ್‌ ಎದುರು ವ್ಯಕ್ತಿ ಆತ್ಮಹತ್ಯೆಗೆ ಯತ್ನ
ಹಲವು ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ಹರಾಜಿನಲ್ಲಿ ಪಡೆದ ಸ್ವತ್ತು ಇದುವರೆಗೂ ತನಗೆ ಹಸ್ತಾಂತರಿಸದ ಹಿನ್ನೆಲೆ ಸಾಲ ಸಮಸ್ಯೆಗೆ ಸಿಲುಕಿದ ವ್ಯಕ್ತಿಯೋರ್ವ ಪಟ್ಟಣದ ಬ್ಯಾಂಕ್ ಎದುರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಘಟನೆ ಬುಧವಾರ ಶಿಕಾರಿಪುರದಲ್ಲಿ ನಡೆದಿದ್ದು, ಎಸ್.ಪಿ.ಸಂತೋಷಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದು, ಬ್ಯಾಂಕ್ ಬಾಗಿಲಿನಲ್ಲಿಯೇ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಆತ್ಮಹತ್ಯೆ ಯತ್ನ ವಿಫಲಗೊಳಿಸಿದ್ದಾರೆ.
ಆಧ್ಯಾತ್ಮಿಕ ಸಂಘರ್ಷ ಒಳ್ಳೆಯ ಬೆಳವಣಿಗೆಯಲ್ಲ
ಆಧುನಿಕ ಜಗತಿನ ಭರಾಟೆಗೆ ಸಿಲುಕಿ ಆಧ್ಯಾತ್ಮಿಕ ರಂಗದಲ್ಲಿ ಸಂಘರ್ಷಗಳು ತಾರಕ್ಕಕೇರುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ವ್ಯಕ್ತಿಯಲ್ಲಿನ ವೈಚಾರಿಕ ಚಿಂತನೆಗಳು ಆತನಲ್ಲಿ ನಾಸ್ಥಿಕ ಪ್ರವೃತಿ ಬೆಳೆಯಲು ಅಸ್ಪದ ನೀಡಬಾರದು. ಧರ್ಮಪ್ರಧಾನ ಭಾರತದಲ್ಲಿ ಹಲವಾರು ಧರ್ಮಗಳು ಅನ್ಯೂನವಾಗಿ ಸಹಜೀವನ ನಡೆಸುತ್ತಿವೆ. ವ್ಯಕ್ತಿಗಳ ಧರ್ಮಗಳು ಬೇರೆಯಾದರೂ, ಎಲ್ಲ ಧರ್ಮಗಳ ಗುರಿ ಮಾನವನ ಕಲ್ಯಾಣವಾಗಿದೆ. ಸ್ವಧರ್ಮದಲ್ಲಿ ನಿಷ್ಠೆ, ಪರಧರ್ಮದೊಟ್ಟಿಗೆ ಸಹಿಷ್ಣುತೆ ತೋರಬೇಕು. ಆಗ ಆರೋಗ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯರು ಹೇಳಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅವಕಾಶ ಪುಣ್ಯಫಲ: ಸಚಿವ
ಶಿಕ್ಷಣ ಕ್ಷೇತ್ರದ ಅನುಭವವಿಲ್ಲದ ನನಗೆ ಮುಖ್ಯಮಂತ್ರಿ ಅವರು ನೀಡಿದ ಶಿಕ್ಷಣ ಸಚಿವ ಸ್ಥಾನವನ್ನು ದೇವರ ಕೆಲಸ ಎಂದು ಅರಿತು ರಾಜ್ಯದ 76 ಸಾವಿರ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು 1.20 ಕೋಟಿ ವಿದ್ಯಾರ್ಥಿಗಳ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ಪುಣ್ಯದ ಫಲ. ಈ ಅವಕಾಶ ಯಶಸ್ವಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭದ್ರಾವತಿಯಲ್ಲಿ ಹೇಳಿದ್ದಾರೆ.
ಕುವೆಂಪು ವಿವಿ ವ್ಯಾಪ್ತಿ ಎಲ್ಲ ಕಾಲೇಜುಗಳಲ್ಲಿ ಸಮಸ್ಯೆ
ಶಿವಮೊಗ್ಗ ಜಿಲ್ಲೆ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಇದರ ಪರಿಣಾಮ ವಿ.ವಿ. ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಲೇಜುಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ಪಾಠಗಳು, ಪರೀಕ್ಷೆಗಳು ಸರಿಯಾಗಿ ನಡೆಯುತ್ತಿಲ್ಲ. ವಿದ್ಯಾರ್ಥಿ ವೇತನಕ್ಕೆ ತೊಂದರೆಯಾಗಿದೆ. ಮುಖ್ಯವಾಗಿ ವಿ.ವಿ.ಗೆ ಕಾಯಂ ಕುಲಪತಿ ಹಾಗೂ ಕುಲಸಚಿವರು (ಶೈಕ್ಷಣಿಕ) ಇನ್ನೂ ನೇಮಕವೇ ಆಗಿಲ್ಲ ಎಂದು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಶಿವಮೊಗ್ಗದಲ್ಲಿ ಬುಧವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಳೆಯಿಂದ ರಾಜ್ಯಮಟ್ಟದ ಕೀಲು, ಮೂಳೆತಜ್ಞರ ಸಮ್ಮೇಳನ
ಶಿವಮೊಗ್ಗ ಕೀಲು ಮತ್ತು‌ ಮೂಳೆ ತಜ್ಞರ ಸಂಘ ಮತ್ತು ರಾಜ್ಯ ಕೀಲು ಮತ್ತು ಮೂಳೆ ತಜ್ಞರ ಸಂಘ ಸಹಯೋಗದಲ್ಲಿ ಫೆ.2ರಿಂದ 4ರವರೆಗೆ ಸುಬ್ಬಯ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ರಾಜ್ಯಮಟ್ಟದ ಕೀಲು ಮತ್ತು ಮೂಳೆತಜ್ಞರ ಸಮ್ಮೇಳನ ನಡೆಯಲಿದೆ. 200 ಹೆಚ್ಚು ಸಂಪನ್ಮೂಲ ತಜ್ಞ ವೈದ್ಯರು ಸಮ್ಮೇಳನದಲ್ಲಿ ಮಾರ್ಗದರ್ಶನ ನೀಡಲಿದ್ದು, 400ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮಂಡನೆ ಆಗಲಿದೆ. ಫೆ.2ರಂದು 5 ವಿಷಯಗಳಲ್ಲಿ ಕಾರ್ಯಾಗಾರ ನಡೆಯಲಿದೆ ಎಂದು ಸಮ್ಮೇಳನ ಸಂಘಟನಾ ಅಧ್ಯಕ್ಷ ಡಾ. ಪಿ.ಆರ್. ಸುಧೀಂದ್ರ ಹೇಳಿದ್ದಾರೆ.
  • < previous
  • 1
  • ...
  • 393
  • 394
  • 395
  • 396
  • 397
  • 398
  • 399
  • 400
  • 401
  • ...
  • 490
  • next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved