ಧರೆಗುರುಳಿದ ವಿದ್ಯುತ್ ಕಂಬಗಳು, ತಲೆಕೆಳಗಾದ ಬಾಳೆತಾಲೂಕಿನ ಹಲವೆಡೆ ಬಿರುಗಾಳಿ, ಗುಡುಗು, ಮಿಂಚು ಸಹಿತ ಭಾನುವಾರ ರಾತ್ರಿ ಸುರಿದ ಮಳೆಗೆ ಹತ್ತಾರು ಮರಗಿಡಗಳು, ವಿದ್ಯುತ್ ಕಂಬಗಳು ಮನೆಯ ಹೆಂಚುಗಳು ಧರೆಗುರುಳಿವೆ. ಈ ಮಧ್ಯೆ ಸುಡು ಬಿಸಿಲಿನಿಂದ ತತ್ತರಗೊಂಡಿದ್ದ ಜನರಿಗೆ ಮತ್ತು ರೈತರಿಗೆ ಸುರಿದ ಮಳೆಗೆ ಸಂತಸ ತಂದಿದೆ.