ಮುನಿಯಾಲು ಆಸ್ಪತ್ರೆಯಲ್ಲಿ ಮೊಣಕಾಲು ನೋವು ಚಿಕಿತ್ಸಾ ಶಿಬಿರಈ ಶಿಬಿರವನ್ನು ಸೋಮವಾರ ಕಾಲೇಜಿನ ಪ್ರಾಂಶುಪಾಲ ಡಾ. ಸತ್ಯನಾರಾಯಣ ಬಿ., ಪಿ.ಜಿ. ಡೀನ್ ಮತ್ತು ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ. ಚಂದ್ರಕಾಂತ್ ಭಟ್, ರಸಶಾಸ್ತ್ರ ಮತ್ತು ಬೈಷಜ್ಯ ವಿಭಾಗದ ಮುಖ್ಯಸ್ಥ ಡಾ. ದಿನೇಶ್ ನಾಯಕ್ ಜೆ., ಕಾಯಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಶ್ಮಿ ಕಲ್ಕೂರ, ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಪ್ರಿಯಾಂಕ ರಾಥೋಡ್ ಅವರು ಜೊತೆಯಾಗಿ ದೀಪೋಜ್ವಲನ ಮಾಡುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು.