ಸಂತೋಷದ ಬುದುಕು ಕಟ್ಟಿಕೊಡುವುದೇ ಧರ್ಮಕನ್ನಡಪ್ರಭ ವಾರ್ತೆ ತಿಕೋಟಾ: ಸಂತೋಷದ ಬದುಕು ಕಟ್ಟಿಕೊಂಡು ಬದುಕುವುದೇ ಧರ್ಮ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಬಾಬಾನಗರ ಗ್ರಾಮದಲ್ಲಿ ನಡೆದ ಹಜರತ್ ಬಾಬಾ ಪಾಣಿಸಾಹೇಬ ಉರುಸ್ ಹಾಗೂ ಸರ್ವಧರ್ಮ ಭಾವೈಕ್ಯತಾ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಸಿದು ಬಂದವನಿಗೆ ಅನ್ನ, ನೀರು ಕೊಟ್ಟು, ದುಃಖದಿಂದ ಬಂದವರ ಕಣ್ಣಿರು ಒರೆಸಿ ಒಂದೆರಡು ಮಾತು ಹೇಳು ಅದು ಧರ್ಮ, ಇನ್ನೊಬ್ಬರ ಮನಸ್ಸಿಗೆ ದು:ಖ, ನೋವು ಕೊಡಲಾರದೇ ಇದ್ದರೆ ಅದು ಧರ್ಮ. ಧರ್ಮ ಅಂದರೆ ಸಂತೋಷವಾಗಿ ಬದುಕುವದು. ಸಂತೋಷದಿಂದ ಬದುಕುಕಟ್ಟಿಕೊಂಡು ಭಾವ್ಯಕ್ಯತೆಯಿಂದ ಕೂಡಿ ಬಾಳುವುದೇ ಧರ್ಮ ಎಂದು ತಿಳಿಸಿದರು.