ಬಾಣದಿಂದ ನೀರು ಚಿಮ್ಮಿಸಿದ್ದರು ಶ್ರೀರಾಮ!ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿಗೂ ಅಯೋಧ್ಯೆ ಪ್ರಭು ಶ್ರೀರಾಮನ ನಂಟಿದೆ. ಮಾವು, ನೀಲಹಣ್ಣು, ಹುಣಸೆ ಮರದ ಬನದಲ್ಲಿ ಶ್ರೀರಾಮ ವಾಸ್ತವ್ಯ ಮಾಡಿ, ಲಿಂಗವನ್ನು ಪ್ರತಿಷ್ಠಾಪನೆ ಮಾಡಿ, ಲಿಂಗ ಪೂಜೆಗಾಗಿ ಶ್ರೀರಾಮಚಂದ್ರ ತಮ್ಮ ಬಾಣದಿಂದ ಬಾವಿ ತೋಡಿ ನೀರು ಚಿಮ್ಮುವಂತೆ ಮಾಡಿದ್ದರಿಂದ ಇಂದಿಗೂ ಆ ಬಾವಿ ಎಂತಹ ಬರ ಇದ್ದರೂ ನೀರು ಮಾತ್ರ ಬತ್ತಿಲ್ಲ. ಶ್ರೀರಾಮಚಂದ್ರ ತಾವು ತೋಡಿದ ಬಾವಿಯಿಂದ ಲಿಂಗಪೂಜೆಗೆ ಬಾವಿಯಿಂದ ತೀರ್ಥ ತಂದು ಪೂಜೆ ಮಾಡುತ್ತಿದ್ದರು. ಇದರಿಂದ ರಾಮತೀರ್ಥ ಎಂಬ ಹೆಸರು ಬಂದಿದೆ ಎಂಬುದು ಪ್ರತೀತಿ.