ಇಂಡಿಯಲ್ಲಿ ಶ್ರೀರಾಮ, ಹನುಮಾನ ಕೇಸರಿ ಧ್ವಜಗಳೊಂದಿಗೆ ಬೈಕ್ ರ್ಯಾಲಿಇಂಡಿ ಪಟ್ಟಣದ ಬಸವೇಶ್ವರ ವೃತ್ತ, ಶ್ರೀ ಬಸವರಾಜೇಂದ್ರ ದೇವಸ್ಥಾನ, ಶ್ರೀ ಶಾಂತೇಶ್ವರ ದೇವಸ್ಥಾನ, ಎಪಿಎಂಸಿ, ಅಗಸಿ ಹನುಮಾನ ದೇವಸ್ಥಾನ, ಸರಾಪ ಬಜಾರ್, ಕೆಇಬಿ ಹನುಮಾನ ದೇವಸ್ಥಾನ, ಕೆಇಬಿ ಸೇವಾಲಾಲ ದೇವಸ್ಥಾನ ಸೇರಿದಂತೆ ಹಲವು ಪ್ರದೇಶದಲ್ಲಿ ಶ್ರೀರಾಮ ದೇವರ ಭಾವಚಿತ್ರ ಇಟ್ಟು ವಿಶೇಷ ಪೂಜೆ, ಹೋಮ, ಭಜನೆ, ಮಹಾಮಂಗಳಾರುತಿ, ಮಹಾಪ್ರಸಾದ ಮೊದಲಾದ ಕಾರ್ಯಕ್ರಮಗಳು ನಡೆಸಿ ಶ್ರೀರಾಮ ದೇವರಿಗೆ ಭಕ್ತಿಭಾವದಿಂದ ಭಕ್ತಿಯನ್ನು ಸಮರ್ಪಿಸಿದರು. ಎಲ್ಲ ದೇವಸ್ಥಾನದಲ್ಲಿ ಸಿಹಿ ಪ್ರಸಾದ ವಿತರಿಸುವ ಕೆಲಸ ಭಕ್ತಿಭಾವದಿಂದ ನಡೆಯಿತು. ಕೆಲ ಯುವ ಸಂಘಟನೆ ಕಾರ್ಯಕರ್ತರು ಶ್ರೀರಾಮ, ಹನುಮಾನ ಭಾವಚಿತ್ರ ಹೊಂದಿರುವ ಕೇಸರಿ ಧ್ವಜಗಳೊಂದಿಗೆ ಬೈಕ್ ರ್ಯಾಲಿ ನಡೆಸಿದರು.