ಶ್ರೀರಾಮನ ಮಂತ್ರಾಕ್ಷತೆ ಸೌಹಾರ್ದಯುತ ವಿತರಣೆದೇವರಹಿಪ್ಪರಗಿ ಪಟ್ಟಣದಲ್ಲಿ ಶನಿವಾರ ಜಿಲ್ಲಾ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ಪಟ್ಟಣದ ಪ್ರಮುಖರು, ಸಂಘಟನೆ ಹಾಗೂ ರಾಜಕೀಯ ಮುಖಂಡರ ಸಂಧಾನ ಯಶಸ್ವಿಯಾಗಿದೆ. ಪಟ್ಟಣದಲ್ಲಿ ಕಳೆದ ರಾತ್ರಿ ನಡೆದ ಚಿಕ್ಕ ಘಟನೆ ಮರೆತು ದೇಶದಲ್ಲಿ ಶ್ರೀರಾಮನ ಅದ್ಧೂರಿ ಉತ್ಸವಕ್ಕೆ ನಾವೆಲ್ಲರೂ ಸಾಕ್ಷಿ ಆಗೋಣ ಎಂದು ಹಿಂದುಪರ ಸಂಘಟನೆ ಮುಖಂಡರು ಹಾಗೂ ಮುಸ್ಲಿಂ ಮುಖಂಡರೊಂದಿಗೆ ಪಟ್ಟಣದ ಪ್ರಮುಖರು ಮಾತುಕತೆಯ ಮೂಲಕ ಸಂಧಾನ ಸಭೆ ಯಶಸ್ವಿಯಾಗಿದೆ.