ಜಾತ್ರೆಗಳಿಂದ ಜನರಲ್ಲಿ ಭಕ್ತಿ,ವೈರಾಗ್ಯ,ಜ್ಞಾನದ ಜಾಗೃತಿಬಸವನಬಾಗೇವಾಡಿ: ಜಾತ್ರೆಗಳು ಜನರಲ್ಲಿ ಭಕ್ತಿ, ವೈರಾಗ್ಯ, ಜ್ಞಾನದ ಜಾಗೃತಿ ಮೂಡಿಸುತ್ತವೆ. ಜನರು ಜಾತ್ರೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಉತ್ಸಾಹ ಹೆಚ್ಚಿಸಿಕೊಳ್ಳುತ್ತಾರೆ. ಕರಿಭಂಟನಾಳ ಗ್ರಾಮದ ಗುರು ಗಂಗಾಧರೇಶ್ವರ ಜಾತ್ರಾಮಹೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಶ್ರೀಗಳು ಹಮ್ಮಿಕೊಳ್ಳುವ ಮೂಲಕ ಜಾತ್ರೆಯನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದು ಬೆಂಗಳೂರಿನ ಸರ್ಪ ಭೂಷಣಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.