ಬೆಂಗಳೂರು ನಗರದಲ್ಲಿ ಸಾರಿಗೆ ಮುಷ್ಕರ ವಿಫಲ: ಕರ್ತವ್ಯಕ್ಕೆ ಹಾಜರಾದ ಬಿಎಂಟಿಸಿ ನೌಕರರುವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸಿದ ಮುಷ್ಕರ ಬೆಂಗಳೂರಿನಲ್ಲಿ ಬಹುತೇಕ ವಿಫಲವಾಗಿದೆ. ಆದರೆ, ಮುಷ್ಕರದ ಮಾಹಿತಿಯಿಂದಾಗಿ ಸಾರ್ವಜನಿಕರು ಸ್ವಂತ ವಾಹನಗಳ ಮೂಲಕ ಸಂಚರಿಸಿದ್ದರಿಂದಾಗಿ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚುವಂತಾಗಿತ್ತು.