ದೇವರ ಆಶೀರ್ವಾದವಿದ್ದರೆ ಮಂಡ್ಯದಲ್ಲಿ ಮನೆ ಕಟ್ಟುವೆ: ಸಂಸದೆ ಸುಮಲತಾ ಅಂಬರೀಶ್ಮಂಡ್ಯದಲ್ಲಿ ನಾನು ಬಾಡಿಗೆ ಮನೆಯಲ್ಲಿದ್ದೇನೆ. ಅಂಬರೀಶ್ ಇದ್ದ ಕಾಲದಿಂದಲೂ ಅದೇ ಮನೆಯಲ್ಲಿದ್ದೇನೆ. ಹನಕೆರೆ ಬಳಿ ಭೂಮಿ ತೆಗೆದುಕೊಂಡು ಗುದ್ದಲಿ ಪೂಜೆ ಮಾಡಿ ಮನೆಕಟ್ಟುವ ಆಸೆ ಇತ್ತು. ಅದರಲ್ಲಿಯೂ ರಾಜಕಾರಣ ನಡೆಯಿತು. ಮನೆ ಕಟ್ಟಲು ಪೂಜೆ ಮಾಡಿದರ ಹಿಂದೆಯೇ ಅಡಚಣೆಗಳು, ಸಮಸ್ಯೆಗಳನ್ನು ಸೃಷ್ಟಿ ಮಾಡಿದರು. ಆ ನಂತರದಲ್ಲಿ ಆ ಕಾರ್ಯವನ್ನು ಅಲ್ಲಿಗೇ ಸ್ಥಗಿತಗೊಳಿಸಿದೆ.